MGNREGA ಹಸು ಕೊಟ್ಟಿಗೆ ಯೋಜನೆ 2026: ರೈತರಿಗೆ ₹57,000 ಸಹಾಯಧನ | ಅರ್ಜಿ ವಿಧಾನ & ಅರ್ಹತೆ

Spread the love

mgnrega hasu kottige yojane 2026


mgnrega hasu kottige yojane 2026 : ಸುದ್ದಿಯ ಪ್ರಮುಖ ಅಂಶಗಳು:

  • ಕೊಟ್ಟಿಗೆ ಕಟ್ಟಲು ₹57000 ವರೆಗೆ ಸರ್ಕಾರದಿಂದ ನೆರವು.
  • ಚಿಕ್ಕ ಹಾಗೂ ಬಡ ರೈತರಿಗೆ ಯೋಜನೆಯಲ್ಲಿ ಮೊದಲ ಆದ್ಯತೆ.
  • ಹಣ ನೇರವಾಗಿ ರೈತರ ಖಾತೆಗೆ ವರ್ಗಾವಣೆ.

ಹಳ್ಳಿಗಳಲ್ಲಿ ದನಕರು ಸಾಕೋದು ಅನೇಕರ ಕುಲಕಸುಬು. ಹೈನುಗಾರಿಕೆಯನ್ನೇ ನಂಬಿ ಬದುಕೋರು ಬಹಳಷ್ಟು ಮಂದಿ ಇದ್ದಾರೆ. ಇಂಥವರಿಗೆ ಸರ್ಕಾರ ಒಂದು ಒಳ್ಳೆಯ ಅವಕಾಶ ಕೊಟ್ಟಿದೆ. MGNREGA ಯೋಜನೆಯಡಿ ಹಸು ಮತ್ತು ಎಮ್ಮೆಗಳಿಗೆ ಚೆನ್ನಾದ ಕೊಟ್ಟಿಗೆ ಕಟ್ಟಿಕೊಳ್ಳೋಕೆ 57,000 ರೂಪಾಯಿವರೆಗೂ ದುಡ್ಡು ಕೊಡ್ತಾರೆ.

📢 Join Our Groups For Latest Updates
📱 Join WhatsApp 📢 Join Telegram

ಯೋಜನೆ ಯಾವುದಕ್ಕೆ, ಯಾರಿಗೆ ಸಿಗುತ್ತೆ, ಹೇಗೆ ಅರ್ಜಿ ಹಾಕಬೇಕು ಅನ್ನೋದನ್ನ ಮುಂದೆ ವಿವರಿಸಿದ್ದೇವೆ.


ಈ ಯೋಜನೆ ಯಾಕೆ ತಂದಿದ್ದಾರೆ?

mgnrega hasu kottige yojane 2026

ಹಿಂದೆಲ್ಲ ದನಗಳನ್ನ ಎಲ್ಲಿ ಬೇಕಾದ್ರೂ ಕಟ್ತಿದ್ರು. ಅದರಿಂದ ಅವುಗಳ ಆರೋಗ್ಯದ ಮೇಲೆ ಪರಿಣಾಮ ಆಗ್ತಿತ್ತು. ಈಗ ವೈಜ್ಞಾನಿಕವಾಗಿ ಕೊಟ್ಟಿಗೆ ಕಟ್ಟಿದ್ರೆ ದನಗಳಿಗೆ ಒಳ್ಳೆಯದು, ಹಾಲೂ ಜಾಸ್ತಿ ಕೊಡುತ್ತೆ. ಅದಕ್ಕಾಗಿಯೇ ಈ ಯೋಜನೆ ತಂದಿದ್ದಾರೆ.

  • ಮಳೆ-ಬಿಸಿಲಿನಿಂದ ದನಗಳಿಗೆ ರಕ್ಷಣೆ ಸಿಗಬೇಕು.
  • ಸ್ವಚ್ಛವಾದ ಕೊಟ್ಟಿಗೆಯಿಂದ ರೋಗರುಜಿನಗಳು ಕಡಿಮೆಯಾಗಬೇಕು.
  • ದನಗಳ ಆರೋಗ್ಯ ಚೆನ್ನಾಗಿದ್ರೆ ಹಾಲು ಜಾಸ್ತಿ ಬರುತ್ತೆ, ರೈತರಿಗೆ ಲಾಭವಾಗುತ್ತೆ.

ಹಸು ಕೊಟ್ಟಿಗೆ ಯೋಜನೆ 2026 ಯಾರಿಗೆಲ್ಲ ಈ ಯೋಜನೆ ಸಿಗುತ್ತೆ?

ಕೆಳಗೆ ಹೇಳಿರೋ ಅರ್ಹತೆ ಇದ್ದವರಿಗೆ ಮಾತ್ರ ಈ ಯೋಜನೆ ಸಿಗುತ್ತೆ.

  • ಅರ್ಜಿ ಹಾಕೋರು ಗ್ರಾಮದಲ್ಲಿ ವಾಸವಾಗಿರಬೇಕು.
  • ನರೇಗಾ ಜಾಬ್ ಕಾರ್ಡ್ ಇದ್ದವರಾಗಿರಬೇಕು.
  • ಚಿಕ್ಕ ರೈತರು, ಬಡ ರೈತರಿಗೆ ಮೊದಲ ಆದ್ಯತೆ.
  • ಕನಿಷ್ಠ 2-3 ಹಸು ಅಥವಾ ಎಮ್ಮೆ ಇದ್ದವರಾಗಿರಬೇಕು.
  • ಕೊಟ್ಟಿಗೆ ಕಟ್ಟೋಕೆ ಸ್ವಂತ ಜಾಗ ಇರಬೇಕು.
  • ನಗರದ ವ್ಯಾಪ್ತಿಯಲ್ಲಿರೋರಿಗೆ ಈ ಯೋಜನೆ ಸಿಗಲ್ಲ.

Also Read:

ಕರ್ನಾಟಕ ಮಹಿಳೆಯರಿಗೆ Zero Interest Loan | 1 ರೂಪಾಯಿ ಬಡ್ಡಿಯೂ ಇಲ್ಲ!

How to Apply Thayi Lakshmi Bond Scheme 2026 – ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ


mgnrega hasu kottige yojane ಎಷ್ಟು ಹಣ ಸಿಗುತ್ತೆ, ಹೇಗೆ ಸಿಗುತ್ತೆ?

ಒಟ್ಟು 57,000 ರೂಪಾಯಿ ಸಹಾಯಧನವನ್ನ ಎರಡು ಭಾಗ ಮಾಡಿದ್ದಾರೆ.

  • ಕೂಲಿ ಕೆಲಸ ಮಾಡೋರಿಗೆ ಸುಮಾರು 10,500 ರೂಪಾಯಿ.
  • ಸಿಮೆಂಟ್, ಕಲ್ಲು, ಇಟ್ಟಿಗೆ ತರೋಕೆ ಸುಮಾರು 46,500 ರೂಪಾಯಿ.

ಈ ಹಣವನ್ನ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕ್ತಾರೆ. ಮಧ್ಯದಲ್ಲಿ ಯಾರೂ ತಲೆಹಾಕೋಕೆ ಆಗಲ್ಲ.


mgnrega hasu kottige yojane ಅರ್ಜಿ ಹಾಕೋದು ಹೇಗೆ?

  • ಮೊದಲು ನಿಮ್ಮ ಊರ ಗ್ರಾಮ ಪಂಚಾಯಿತಿಗೆ ಹೋಗಿ.
  • ಅಲ್ಲಿನ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜೊತೆ ಮಾತಾಡಿ.
  • ಪಂಚಾಯಿತಿಯಲ್ಲಿ ವರ್ಷದ ಕೆಲಸದ ಪಟ್ಟಿ ತಯಾರು ಮಾಡುವಾಗ ನಿಮ್ಮ ಕೊಟ್ಟಿಗೆ ಕೆಲಸವನ್ನೂ ಸೇರಿಸಬೇಕು.
  • ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಒಪ್ಪಿಗೆ ಕೊಟ್ಟ ಮೇಲೆಯೇ ಕೆಲಸ ಶುರು ಮಾಡಿ. ಒಪ್ಪಿಗೆ ಇಲ್ಲದೆ ಕಟ್ಟಿದ್ರೆ ಹಣ ಸಿಗಲ್ಲ.

ಹಸು ಕೊಟ್ಟಿಗೆ ಸಹಾಯಧನ : ಯಾವ ದಾಖಲೆಗಳು ಬೇಕು?

ಕೆಳಗಿನ ಕಾಗದಪತ್ರಗಳನ್ನ ಸಿದ್ಧವಾಗಿಟ್ಟುಕೊಳ್ಳಿ.

  • ನರೇಗಾ ಜಾಬ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಪುಸ್ತಕ (ಆಧಾರ್ ಲಿಂಕ್ ಆಗಿರಲೇಬೇಕು)
  • ಜಾಗದ ಪಹಣಿ (ಆರ್ಟಿಸಿ)
  • ಪಶುವೈದ್ಯರಿಂದ ಪಡೆದ ಪ್ರಮಾಣಪತ್ರ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಬೇಕಿದ್ದರೆ ಮಾತ್ರ)

Also Read:

PM KISAN 2026 Latest Update – ₹6000 ಸಹಾಯಧನ ಕಂತು, eKYC ಕಡ್ಡಾಯ, Beneficiary Status Check ಕನ್ನಡದಲ್ಲಿ

PM Matru Vandana Yojana 2026: ಗರ್ಭಿಣಿ ಮಹಿಳೆಯರಿಗೆ ₹11,000 Direct Benefit


ಫೋಟೋ ತೆಗೆಯೋದು ಯಾಕೆ ಮುಖ್ಯ?

ಸರಕಾರ ಪಾರದರ್ಶಕತೆಗಾಗಿ ಫೋಟೋ ಕಡ್ಡಾಯ ಮಾಡಿದೆ. ಕೆಲಸ ಶುರು ಮಾಡೋ ಮುನ್ನ, ಮಧ್ಯದಲ್ಲಿ, ಕೊನೆಯಲ್ಲಿ ಫೋಟೋ ತೆಗೆದು ಸಾಫ್ಟ್‌ವೇರ್‌ಗೆ ಹಾಕಬೇಕು. ಆಮೇಲೆ ಮಾತ್ರ ಹಣ ಬಿಡುಗಡೆ ಆಗುತ್ತೆ.


ಈ ಯೋಜನೆಯಿಂದ ಏನೆಲ್ಲ ಪ್ರಯೋಜನ?

  • ದನಗಳಿಗೆ ಶಾಶ್ವತವಾದ ವಾಸಸ್ಥಳ ಸಿಗುತ್ತೆ.
  • ಸಗಣಿ ಸ್ವಚ್ಛ ಮಾಡೋದು ಸುಲಭ, ರೋಗಗಳು ಕಡಿಮೆಯಾಗುತ್ತೆ.
  • ಹಾಲಿನ ಗುಣಮಟ್ಟ ಹೆಚ್ಚಿ ಒಳ್ಳೆಯ ಬೆಲೆ ಸಿಗುತ್ತೆ.
  • ಊರಲ್ಲೇ ಕೂಲಿ ಕೆಲಸ ಮಾಡೋರಿಗೆ ಕೆಲಸ ಸಿಗುತ್ತೆ.

ರೈತರು ನೆನಪಿಟ್ಟುಕೊಳ್ಳಬೇಕಾದ ವಿಷಯ

ಸಾಮಾನ್ಯವಾಗಿ ಮೇ-ಜೂನ್ ತಿಂಗಳಲ್ಲಿ ಪಂಚಾಯಿತಿಯಲ್ಲಿ ವಾರ್ಷಿಕ ಕೆಲಸದ ಪಟ್ಟಿ ತಯಾರು ಮಾಡ್ತಾರೆ. ಆಗಲೇ ಅರ್ಜಿ ಹಾಕಿದ್ರೆ ಒಳ್ಳೆಯದು. ಸಮಯಕ್ಕೆ ಸರಿಯಾಗಿ ದಾಖಲೆ ಸಲ್ಲಿಸಿದ್ರೆ ಸಹಾಯಧನ ಸುಲಭವಾಗಿ ಸಿಗುತ್ತೆ.


ನಮ್ಮ ಸಲಹೆ ಏನು ಅಂದ್ರೆ

MGNREGA Government Scheme ಬಹಳಷ್ಟು ಜನರಿಗೆ ಹಣ ಬರೋಕೆ ತಡವಾಗೋದಕ್ಕೆ ಮುಖ್ಯ ಕಾರಣ ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರೋದು. ಅರ್ಜಿ ಹಾಕೋ ಮುನ್ನ ನಿಮ್ಮ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಅಂತ ಖಚಿತಪಡ್ಕೊಳ್ಳಿ. ಪಂಚಾಯಿತಿಯಲ್ಲಿ ಜನ ಕಮ್ಮಿ ಇರುವಾಗ ಹೋಗಿ ಮಾತಾಡಿದ್ರೆ ನಿಮ್ಮ ಕೆಲಸ ಬೇಗ ಆಗುತ್ತೆ.

FAQ (Frequently Asked Questions)

MGNREGA ಹಸು ಕೊಟ್ಟಿಗೆ ಯೋಜನೆ ಅಡಿಯಲ್ಲಿ ಎಷ್ಟು ಹಣ ಸಿಗುತ್ತದೆ?

ಗರಿಷ್ಠ ₹57,000 ವರೆಗೆ ಸಹಾಯಧನ ಸಿಗುತ್ತದೆ.

ಈ ಯೋಜನೆ ಯಾರು ಪಡೆಯಬಹುದು?

ಗ್ರಾಮೀಣ ಭಾಗದ small ಮತ್ತು marginal farmers, Job Card ಹೊಂದಿರುವವರು ಅರ್ಹರು.

ಹಣ ಹೇಗೆ ಸಿಗುತ್ತದೆ?

DBT ಮೂಲಕ ನೇರವಾಗಿ ಫಲಾನುಭವಿಯ bank account ಗೆ ಜಮಾ ಮಾಡಲಾಗುತ್ತದೆ

Aadhaar link ಮಾಡುವುದು ಕಡ್ಡಾಯವೇ?

ಹೌದು, bank account ಗೆ Aadhaar link (seeding) ಆಗಿರಬೇಕು. ಇಲ್ಲದಿದ್ದರೆ ಹಣ ತಡವಾಗಬಹುದು.

📢 Join Our Groups For Latest Updates
📱 Join WhatsApp 📢 Join Telegram

Leave a Comment